S3:E5 – ಧ್ಯಾನದ ಪಯಣ ಇಲ್ಲಿಗೆ ಮುಗಿಯುವುದಿಲ್ಲ! (The Journey Continues.....)

Mastering the Art of Mindfulness. / ಮೈಂಡ್‌ಫುಲ್‌ನೆಸ್ ಅನ್ನೋದು ಒಂದು ಜೀವನಶೈಲಿ.

Episode Notes

In this final session, we recap our journey:

  • Managing Distractions: ಹೇಗೆ ಏಕಾಗ್ರತೆಯನ್ನ ಬೆಳೆಸಿಕೊಳ್ಳುವುದು ಅನ್ನೋದನ್ನ ರೂಢಿಸಿಕೊಂಡಿದ್ದೇವೆ.
  • Building the Habit: ಮೆಡಿಟೇಶನ್ ಅನ್ನ ನಿಮ್ಮ ದಿನನಿತ್ಯದ ಒಂದು ಅವಿಭಾಜ್ಯ ಅಂಗವಾಗಿ (Habit) ಮಾಡಿಕೊಳ್ಳುವ ಹಾದಿಯನ್ನ ಅರಿತಿದ್ದೇವೆ.
  • Managing Reactions & Expectations: ನಮ್ಮ ಆಲೋಚನೆಗಳಿಗೆ ರಿಯಾಕ್ಟ್ ಮಾಡದೆ, ಸರಿಯಾದ ನಿರೀಕ್ಷೆಗಳೊಂದಿಗೆ (Expectations) ಅಭ್ಯಾಸ ಮಾಡೋದನ್ನ ಕಲಿತಿದ್ದೇವೆ.
  • Judgment-Free Living: ಜಡ್ಜ್‌ಮೆಂಟ್ ಮಾಡೋದನ್ನ ನಿಲ್ಲಿಸಿ, ಮೈಂಡ್‌ಫುಲ್ ಆಗಿರೋದು ಹೇಗೆ ಅನ್ನೋದನ್ನ ಚರ್ಚಿಸಿದ್ದೇವೆ.

Today's Practice:ಈಗ ನಿಮಗೆ ಧ್ಯಾನದ ಬಗ್ಗೆ ಒಂದು ಉತ್ತಮ ತಿಳುವಳಿಕೆ ಬಂದಿದೆ. ಹಾಗಾಗಿ, ಇವತ್ತಿನ ಸೆಷನ್‌ನಲ್ಲಿ ಯಾವುದೇ ಗೈಡೆನ್ಸ್ ಇಲ್ಲದೆ (Without any guidance), ನೀವೇ ಸ್ವತಃ 10 ನಿಮಿಷಗಳ ಕಾಲ ಧ್ಯಾನ ಮಾಡಲಿದ್ದೀರಿ.

Quick Guide:

  1. ನಿಮ್ಮ ಉಸಿರಾಟವನ್ನೇ ಆಂಕರ್ ಪಾಯಿಂಟ್ (Anchor Point) ಆಗಿ ಇಟ್ಟುಕೊಳ್ಳಿ.
  2. ನಿಮ್ಮ ಭಾವನೆಗಳು ಮತ್ತು ಆಲೋಚನೆಗಳನ್ನ ಕೇವಲ ಒಬ್ಬ ವೀಕ್ಷಕನಂತೆ ಗಮನಿಸಿ.
  3. ಮನಸ್ಸು ಎಲ್ಲಾದರೂ ಅಲೆದಾಡಿದರೆ, ಮೃದುವಾಗಿ ಮತ್ತೆ ಉಸಿರಾಟದ ಕಡೆಗೆ ಗಮನ ತನ್ನಿ.

ಈ 15 ದಿನಗಳ ಪಯಣ ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತಂದಿದೆ ಎಂದು ನಂಬುತ್ತೇನೆ. ಧ್ಯಾನವನ್ನ ಇಲ್ಲಿಗೆ ನಿಲ್ಲಿಸಬೇಡಿ, ಇದನ್ನ ಪ್ರತಿ ದಿನ ಮುಂದುವರಿಸಿ.