S1:E3 – ಧ್ಯಾನದ ಮೂಲಕ ಅರಿವು ಮತ್ತು ರಿಯಾಲಿಟಿ (Awareness and Reality through Meditation)

ಆಲೋಚನೆಗಳಿಂದ ಅತೀತವಾಗಿ (Going Beyond Thoughts)
Episode Notes
ಸಂಚಿಕೆಯ ಟಿಪ್ಪಣಿಗಳು
- ಮೈಂಡ್‌ಫುಲ್‌ನೆಸ್ ಕೌಶಲ ಬೆಳೆಸಿಕೊಳ್ಳಲು ಮತ್ತು ವಾಸ್ತವಕ್ಕೆ ಹತ್ತಿರವಾಗಲು ಹಲವಾರು ಮೆಡಿಟೇಶನ್ ಟೆಕ್ನಿಕ್ಸ್ ಅಸ್ತಿತ್ವದಲ್ಲಿವೆ.
- ಧ್ಯಾನದ ಸಂದರ್ಭದಲ್ಲಿ ನಾವು ಪ್ರಸ್ತುತ ಕ್ಷಣದಲ್ಲಿ ಇರುತ್ತೇವೆ; ಹಳೆಯದು ಕೇವಲ ನೆನಪಾಗಿರುತ್ತದೆ ಮತ್ತು ಮುಂದಿನದು ಕೇವಲ ನಿರೀಕ್ಷೆಯಾಗಿರುತ್ತದೆ.
- ಮನುಷ್ಯರಾದ ನಾವು ನಿರಂತರವಾಗಿ ಅತಿಯಾಗಿ ಆಲೋಚಿಸುವುದು ಸಹಜ, ಆದರೆ ನಾವು ನಮ್ಮ ಆಲೋಚನೆಗಳನ್ನು ಗಮನಿಸುವುದರಿಂದ ಅವುಗಳ ಬಗ್ಗೆ ಉತ್ತಮವಾಗಿ ತಿಳಿದುಕೊಳ್ಳಬಹುದು.
- ಧ್ಯಾನ ಎಂದರೆ ಆಲೋಚನೆಗಳನ್ನು ನಿಲ್ಲಿಸುವುದಲ್ಲ, ಬದಲಾಗಿ ಆ ಆಲೋಚನೆಗಳಿಂದ ಬರುವ ಸದ್ದು ( noise ) ನಾವಲ್ಲ ಎಂಬುದನ್ನು ಅರಿಯುವುದು.
- ವೈಜ್ಞಾನಿಕ ಸಂಶೋಧನೆಗಳ ಪ್ರಕಾರ, ಧ್ಯಾನವು ಇತರರ ಮೇಲೆ ಅನುಕಂಪ ( empathy ) ಮೂಡಿಸಲು ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.